ಕಣ್ಣು ಶಾಸ್ತ್ರ

ಕಣ್ಣುಗಳ ರಚನೆ, ನಿಜಗೆಲಸ, ಊನ, ಕುಂದು, ರೋಗಗಳನ್ನು ವಿವರಿಸುವ ಶಾಸ್ತ್ರ (ಆಫ್ತಾಲ್ಮೋಲಜಿ). ವೈದ್ಯ ವಿಜ್ಞಾನದಲ್ಲಿ ಒಂದು ಮುಖ್ಯ ಇಂದ್ರಿಯವಾದ ಕಣ್ಣನ್ನು ಇದು ವಿಶೇಷವಾಗಿ ಪರಿಶೀಲಿಸುತ್ತದೆ. ನರಶಾಸ್ತ್ರ, ಒಳಾಂಗ ವೈದ್ಯಶಾಸ್ತ್ರ, ರೋಗಶಾಸ್ತ್ರ, ಶಸ್ತ್ರವೈದ್ಯ, ಔಷಧಶಾಸ್ತ್ರ, ರೋಗನಿರೋಧಕ ಶಾಸ್ತ್ರ, ಪಿಂಡಶಾಸ್ತ್ರ ಮುಂತಾದವೆಲ್ಲ ಇದಕ್ಕೂ ಅನ್ವಯವಾಗುತ್ತವೆ.

ಕಣ್ಣಿನ ವಿಕಾಸದಲ್ಲಿ ಕುಂದು, ರೋಗ,ಗಾಯ, ಪೆಟ್ಟುಗಳು, ರಕ್ತನಂಟು, ಪುಷ್ಟಿಗೇಡು, ಅನುವಳಿಕೆ(ಡಿಜನರೇಷನ್) ಮುಪ್ಪು, ಒಸರಿಕೆ (ರಿಫ್ರಾಕ್ಷನ್) ಇವುಗಳಲ್ಲಿ ಯಾವುದರಿಂದ ನೋಟ ಕೆಟ್ಟರೂ ಅದನ್ನು ಸರಿಪಡಿಸುವ ಜವಾಬ್ದಾರಿ ಕಣ್ಣು ವೈದ್ಯನದು. ಈತ ದೇಹವನ್ನು ಪರೀಕ್ಷಿಸಿ ವೈಗೋ ನರಗಳಿಗೋ ಹತ್ತಿದ ರೋಗಗಳನ್ನು ಕಂಡುಹಿಡಿಯುವಾಗ ನೋಟ ಮತ್ತು ಕಣ್ಣೊಳಗಿನ ಪರೀಕ್ಷೆಗಳನ್ನು ವಿಶೇಷವಾಗಿ ಮಾಡಿ ಮದ್ದುಗಳನ್ನೊ ನೋಟ ಸರಿಪಡಿಸಲು ಕನ್ನಡಕಗಳನ್ನೋ ಸಲಹೆ ಮಾಡಿ, ಬೇಕೆನಿಸಿದಾಗ ಶಸ್ತ್ರವೈದ್ಯವನ್ನೂ ಕೈಗೊಳ್ಳುವನು. ಕಣ್ಣು ವೈದ್ಯರ ತರಬೇತಿಗಾಗಿ ಬೇರೆ ಆಸ್ಪತ್ರೆಗಳೂ ಸಂಸ್ಥೆಗಳೂ ಸಂಶೋಧನಾಲಯಗಳೂ ಇವೆ. ಕಣ್ಣುವೈದ್ಯ ಪರಿಣತ ಮೊದಲು ಸಾಮಾನ್ಯ ವೈದ್ಯನಾಗಿರಬೇಕು ನಂತರ ವೈದ್ಯರ ಕಾಲೇಜುಗಳಲ್ಲೂ ಪದವೀಧರರಾಗುವವರಿಗೆ ಇದಕ್ಕಾಗಿ ಬೇರೆ ತರಬೇತಿ 2 ವರ್ಷ -ಡಿ.ಓ.ಎಂ.ಎಸ್ ಮತ್ತು 3 ವರ್ಷ ಎಂ.ಎಸ್.ಪದವಿ ಪಡೆಯಬೇಕು.

ಒಬ್ಬನ ಬಾಳುವೆಯಲ್ಲಿ ಕಣ್ಣಿನ ಮುಖ್ಯಪಾತ್ರ ನಮ್ಮ ಪೂರ್ವಿಕರಿಗೆ ಚೆನ್ನಾಗಿ ಮನದಟ್ಟಾಗಿತ್ತು. ಅವರಿಗೆ ಕೊಂಚಮಟ್ಟಿಗೆ ಕಣ್ಣಿನ ರಚನೆ ತಿಳಿದಿದ್ದರೂ 18ನೆಯ ಶತಮಾನಕ್ಕೂ ಹಿಂದೆ ಕಣ್ಣಿನ ನಿಜಗೆಲಸದ ಕಲ್ಪನೆ ಅಷ್ಟಾಗಿರಲಿಲ್ಲ. ಪುರಾತನ ಈಜಿಫ್ಟಿಯನರು ಕಣ್ಣು ಶಾಸ್ತ್ರವನ್ನು ವಿಶೇಷ ಶಾಸ್ತ್ರವೆಂದು ಗಣಿಸಿದ್ದರು. 17ನೆಯ ಶತಮಾನದ ಕೆಪ್ಲರ್ ಡೆಕಾರ್ಟೆ ಅವರಿಗೆ ಕಣ್ಣುಶಾಸ್ತ್ರದ ಮೂಲ ಸೂತ್ರಗಳ ಅರಿವು ಇತ್ತೆಂದು ತೋರುತ್ತದೆ. ಕಣ್ಣಿನ ರೋಗಗಳನ್ನು ಕುರಿತು ಕೆಲವು ಪುಸ್ತಕಗಳಿದ್ದುವು: ಜಾರ್ಜ್ ಬಾರ್ಟಿಷನ ಜರ್ಮನ್ ಪುಸ್ತಕ (1583), ಕಣ್ಣಿನ ನೋಟದ ಕೆಡದಂತಿರಿಸಿಕೆ ಎಂಬ ರಿಚರ್ಡ್ ಬ್ಯಾನಿಸ್ಟರನ ಇಂಗ್ಲಿಷ್ ಪುಸ್ತಕ (1583). ಲೀಡನ್ನಿನಲ್ಲಿ ಹರ್ಮನ ಬೊಯೊರೇವ್ ಕಣ್ಣು ಶಾಸ್ತ್ರದ ಮೇಲೆ ಉಪನ್ಯಾಸಗಳನ್ನಿತ್ತ (1708) ಕಣ್ಣಿನ ಮೇಲೆ ಬಿಂದುವಿಗಾಗಿ (ಕ್ಯಾಟರಾಕ್ಟ್) ಕಣ್ಣಿನ ಮಸೂರವನ್ನು ತೆಗೆದುಹಾಕುವ ವಿಧಾನವನ್ನು ಮೊದಲು ಜಾರಿಗೆ ತಂದ ಜಾಕ್ವಿಸ್ ಡೇವಿಯಲ್(1752) ಕಣ್ಣು ನೋಟದ ಕುಂದುಗಳಲ್ಲಿ, ಹತ್ತ ಕಣ್ಣು (ಗ್ಲೊಕೋಮಾ) (1750). ರಾತ್ರಿ ಕುರುಡು (1767), ಬಣ್ಣ ಕುರುಡುತನ (1794), ಅಸಮನಿಟ್ಟು (ಅಸ್ಟಿಗ್ಮಾಟಿಸಂ) (1801) ಮೊದಲು ಗಮನಕ್ಕೆ ಬಂದುವು. ಕಣ್ಣೊಳಗಿನ ಹೊಂದುವಳಿ(ಅಕಾಮಡೇಷನ್) ಸ್ನಾಯುಗಳನ್ನು ಮಾರ್ಗಾಗ್ನಿ ವಿವರಿಸಿದ (1761). ತಾರಕೆಯ (ಐರಿಸ್) ಚಲನೆಗಳನ್ನು ಮೊದಲಾ ಫಾಂಟಾನ ಬಣ್ಣಿಸಿದ (1775). ಕಣ್ಣೊಳಗಿರುವ ಬಿಳಿ ಚುಕ್ಕೆಯನ್ನು (ಮ್ಯಾಕ್ಯುಲ ಲೂಟಿಯ) ಬುeóÉ ಬಣ್ಣಿಸಿದರೂ ಅದಕ್ಕೆ ಹೆಸರಿಟ್ಟವ ಸೊಮ್ಮರಿಂಗ್ (1791). ತಾಮಸ್ ಯಂಗ್‍ನ ಪ್ರಕಟಣೆಗಳಿಂದ (1800-1804) ದೃಕ್‍ಶಾಸ್ತ್ರದ (ಆಪ್ಟಿಕ್ಸ್) ಯಾಂತ್ರಿಕತೆ, ಬೆಳಕಿನ ಅಲೆ ಸಿದ್ಧಾಂತ ಇವುಗಳಿಂದ ಕಣ್ಣುಶಾಸ್ತ್ರ ಮುನ್ನಡೆಯಿತು. ಆದರೆ ಇಂದಿನ ಕಣ್ಣುಶಾಸ್ತ್ರ ನಿಜವಾದ ವಿಜ್ಞಾನದ ಮಟ್ಟಕ್ಕೇರಿದ್ದು ಹರ್ಮನ್ ವಾನ್‍ಹೆಲ್ಮ್ ಹೋಲ್ಜ್ ಕಣ್ಣು ದರ್ಶಕವನ್ನು (ಆಫ್ತಾಲ್ಮೋಸ್ಕೋಪ್) ಕಂಡುಹಿಡಿದ (1850) ಮೇಲೆ ಮಾತ್ರ 19ನೆಯ ಶತಮಾನದ ಕೊನೆಯರ್ಧದಲ್ಲಿ ಆಲ್ಟೆಕ್ಟ್ ವಾನ್ ಗ್ರೀಫ್ (1828-70) ಮತ್ತು ಅವನ ಹಿಂಬಾಲಕರು ಕಣ್ಣಿನ ಓಸರಿಕೆ, ಹೊಂದುವಳಿಗಳನ್ನು ಅಭ್ಯಸಿಸಿ ಅವುಗಳ ರೋಗಗಳನ್ನು ಚೆನ್ನಾಗಿ ಚಿಕಿತ್ಸೆ ಮಾಡಿ ಶಸ್ತ್ರಕ್ರಿಯಾ ವಿಧಾನಗಳನ್ನೂ ಜಾರಿಗೆ ತಂದರು. ಕಣ್ಣಿನ ಶಸ್ತ್ರವೈದ್ಯದ ತಂದೆ ಗ್ರೀಫ್ ಎನ್ನಬಹುದು. ನೋಟದ ಕುಂದುಗಳನ್ನು ಕನ್ನಡಕಗಳಿಂದ ಸರಿಪಡಿಸುವ ಇಂದಿನ ವಿಧಾನಗಳನ್ನು ಜಾರಿಗೆ ತಂದವ ಫ್ರಾನ್ಸ್ ಕಾರ್ನೆಲಿಸ್ ಡಾಂಡರ್ಸ್ (1818-89). ಕಣ್ಣಲ್ಲಿ ಬೆಳಕಿನ ಗತಿಯನ್ನು ವಿವರಿಸಿ ನೊಬೆಲ್ ಬಹುಮಾನ (1911) ಪಡೆದವನು ಅಲ್ಪಾರ್ ಗಲ್ ಸ್ಟ್ರಾಂಡ್ (1862-1930).
ಕಣ್ಣಿನ ಪೊರೆ ಶಸ್ತ್ರಕ್ರಿಯೆಯನ್ನು ಯೋಜನಾಬದ್ಧ ರೀತಿಯಲ್ಲಿ ಮಾಡಿದ ಕೀರ್ತಿ ಜಾಕ್ಸ್ ಡೇವಿಯಲ್(1696-1762)ಗೆ ಸಲ್ಲುತ್ತದೆ. 1748ರಲ್ಲಿ ಈತ ಇದನ್ನು ಮಾಡಿ ತೋರಿಸಿದ.

ಈತ ಕಾರ್ನಿಯಾದ ಕೆಳಭಾಗದಲ್ಲಿ ಉದ್ದನೆ ಗಾಯಮಾಡಿ, ಸೂಕ್ತ ಉಪಕರಣದಿಂದ ಅದನ್ನು ಎತ್ತಿ ಹಿಡಿದು ಮಸೂರದ ಹಿಂದೆ ಸೂಜಿಯನ್ನು ತೂರಿಸಿ ಮಸೂರ ಹೊರ ತೆಗೆಯುತ್ತಿದ್ದ. ಹಾಗೆ ಮಾಡುವಾಗ ಕೆಲವೊಮ್ಮೆ ವಿಟ್ರಿಯಸ್ ಹೊರಗೆ ಬರುತ್ತಿತ್ತು. 1756ರಲ್ಲಿ ಈತ 434 ಶಸ್ತ್ರಕ್ರಿಯೆ ಮಾಡಿದ್ದು, ಅದರಲ್ಲಿ 50ರಲ್ಲಿ ಮಾತ್ರ ಅಪಯಶಸ್ಸು ದೊರಕಿತ್ತು. 

ಡೇವಿಯಲ್‍ನ ತಂತ್ರ ಕಷ್ಟವಾದ್ದರಿಂದ ಪರ್ಸಿವಲ್ ಪಾಟ್ ಎಂಬ ಬ್ರಿಟಿಷ್ ನೇತ್ರತಜ್ಞ, ಆಂಟೋನಿಯೋ ಸ್ಕಾರ್ಪ್ ಎಂಬ ಇಟಲಿಯ ವೈದ್ಯ ಡುಪಿಟ್ರಿನ್ ಎಂಬ ಫ್ರೆಂಚ್ ತಜ್ಞ-ಎಲ್ಲರೂ ಹಳೆಯ ಕೌಚಿಂಗ್ ಪದ್ಧತಿಯನ್ನೇ ಅನುಸರಿಸುತ್ತಿದ್ದರು. 1752ರಲ್ಲಿ ಜಾರ್ಜ್ ಡಿ.ಲ.ಫಾಯ್ ಎಂಬ ಫ್ರೆಂಚ್ ತಜ್ಞ ಡೇವಿಯಲ್‍ನ ತಂತ್ರವನ್ನು ತೀರ ಸುಲಭಗೊಳಿಸಿ, ಎರಡೇ ಉಪಕರಣಗಳಿಂದ ಪೊರೆ ತೆಗೆಯುವುದನ್ನು ಪ್ರಚಲಿತಗೊಳಿಸಿದ.

ನಂತರದ ಬೆಳವಣಿಗೆಯೆಂದರೆ 1759-84ರ ಮಧ್ಯೆ ಪಿಯರ್ ಫ್ರಾಂಕೋಯಿಸ್-ಬೆನಜೆಟ್ ಪಾಮಾರ್ಡ್ ತಂದ ಮೂರು ಬದಲಾವಣೆಗಳು, ರೋಗಿಯನ್ನು ಕೂರಿಸುವುದಕ್ಕಿಂತ ಮಲಗಿಸಿ ಶಸ್ತ್ರಕ್ರಿಯೆ ಮಾಡಿದರೆ ಒಳ್ಳೆಯದು ಎಂಬ ಅಂಶ. ನಂತರ ಶಸ್ತ್ರಕ್ರಿಯೆ ಮಾಡುವಾಗ ಕಣ್ಣು ಚಲಿಸದಂತೆ ಮಾಡಲು ಒಂದು ಉಪಕರಣವನ್ನು ಉಪಯೋಗಿಸಿದ. ಕಾರ್ನಿಯದ ಕೆಳಭಾಗಕ್ಕಿಂತ ಮೇಲ್ಭಾಗದಲ್ಲಿ ಗಾಯ ಮಾಡಿದರೆ ಹೆಚ್ಚು ಒಳ್ಳೆಯದು ಎಂಬುದನ್ನು ಕಂಡುಹಿಡಿದ.

ಮೊದಲಿನ ಗಾಯಗಳು ಕಾರ್ನಿಯದ ಮೇಲೆಯೇ ಇರುತ್ತಿದ್ದವು. 1863ರಲ್ಲಿ ಜೂಲಿಯಸ್ ಜೇಕವಸನ್ ಎಂಬಾತ ಲಿಂಬಸ್ ಭಾಗದಲ್ಲಿ ಗಾಯ ಮಾಡಲು ಆರಂಬಿಸಿದ ನಂತರ ತೊಡಕುಗಳು ಶೇ.3ಕ್ಕೆ ಇಳಿದವು. 1866ರಲ್ಲಿ ಅಲ್ಟ್ರೆಕ್ಟ್‍ವಾನ್ ಗ್ರೀಫೆ ಲೀನಿಯರ್ ಎಕ್ಸ್‍ಟ್ರಾಕ್ಷನ್ ಎಂಬ ಹೊಸ ಪದ್ಧತಿಯನ್ನು ಆರಂಭಿಸಿದ. ಐರಿಡೆಕ್ಟಮಿ ಮಾಡುವ ಪದ್ಧತಿ ಆಗಲೇ ಆರಂಭವಾಯಿತು. ಆದರೆ ತಾರಕೆಯ ಒಂದು ಬದಿಗೆ ಮಾತ್ರ ಮಾಡುವ ಫೆರಿಫರಲ್ ಐರಿಡೆಕ್ಟಮಿ 1895ರಲ್ಲಿ ಬಜಾರ್ಡಿ ಎಂಬಾತನಿಂದ ಆರಂಭವಾಯಿತಾದರೂ, 1911-12ರಲ್ಲಿ ಎಲ್ಷ್‍ನಿಗ್‍ನಿಂದ ಜನಪ್ರಿಯವಾಯಿತು.

ಮಸೂರವನ್ನು ಅದರ ಪದರಗೂಡಲೇ ಇಡಿಯಾಗಿ ಹೊರಗೆ ತೆಗೆಯುವ ಪದ್ಧತಿ 1753ರಲ್ಲಿ ಸ್ಯಾಮುಯೆಲ್ ಷಾರ್ಪ್ ಲಂಡನ್‍ನಲ್ಲಿ ಆರಂಭಿಸಿದ. ಈತ ತನ್ನ ಹೆಬ್ಬೆರಳಿನ ಒತ್ತಡದಿಂದಲೇ ಮಸೂರವನ್ನು ಹೊರ ತೆಗೆಯುತ್ತಿದ್ದ. ನಂತರ ವಿವಿಧ ಉಪಕರಣಗಳಿಂದ ಒತ್ತಡ ಕೊಟ್ಟು ಮಸೂರ ಹೊರ ತೆಗೆಯಲಾರಂಭಿಸಿದರು. ಅಮೃತಸರದ ಮಲ್ರೋನೆಜ್ ಎಂಬಾತ ಕಂಡು ಹಿಡಿದ ಪದ್ಧತಿಯನ್ನು ಕಲೋನೆಲ್ ಹೆನ್ರಿ ಸ್ಮಿತ್ (1900-26) ಎಂಬಾತ ಭಾರತದ ಬಹಳ ರೋಗಿಗಳಲ್ಲಿ ಪ್ರಯೋಗಿಸಿ ಶಸ್ತ್ರಕ್ರಿಯೆ ನಡೆಸಿದ. ಇದೇ ರೀತಿ ಲೂಪ್, ವೆಕ್ವಿಸ್, ಸ್ಪೂನ್, ಮೊದಲಾದವುಗಳನ್ನು ಉಪಯೋಗಿಸಿ ಕಣ್ಣಿನ ಗುಡ್ಡೆಗೆ ಒತ್ತುಕೊಟ್ಟು ಮಸೂರ ಹೊರತೆಗೆಯುವ ಪದ್ಧತಿಯನ್ನು ಜಗತ್ತಿನಾದ್ಯಂತ ವಿವಿಧ ತಜ್ಞರುಗಳು ನಡೆಸತೊಡಗಿದರು. ಇದರಲ್ಲಿ ವಿಟ್ರಿಯಸ್ ಹೊರಗೆ ಬಂದು ವಿವಿಧ ತೊಂದರೆಗಳನ್ನು ಒಡ್ಡುವ ಅಪಾಯ ಇದ್ದೇ ಇತ್ತು. ಇದನ್ನು ಮನಗೊಂಡು ಇದಕ್ಕೆ ಬದಲಾಗಿ ಮಸೂರವನ್ನು ಚಿಮಟದಿಂದಲೇ ಹೊರ ತೆಗೆಯುವ ಪದ್ಧತಿಯನ್ನು 1870ರಲ್ಲಿ ಟೆರ್ಸನ್ ಎಂಬಾತ ಆರಂಭಿಸಿದನು. ನಂತರ 1878ರಲ್ಲಿ ಲ್ಯಾಂಡ್ಸ್ ಬರ್ಗ್ ಎಂಬಾತ ಬೇರೆ ರೀತಿಯ ಉಪಕರಣದಿಂದ ಇದನ್ನು ಮಾಡಿದರೂ, ಯೂಜಿನ್‍ಕಾಲ್ಟ್ (1894-1925) ಎಂಬಾತ ಪ್ಯಾರಿಸ್‍ನಲ್ಲಿ, ಇದಕ್ಕಾಗಿಯೇ ಬೇರೆ ರೀತಿಯ ಚಿಮಟವನ್ನೇ (ಛಿಚಿಠಿsuಟeಜಿoಡಿಛಿeಠಿs) ಕಂಡು ಹಿಡಿದ. ಇದನ್ನು ಹಲವು ಬದಲಾವಣೆಗಳೊಂದಿಗೆ, ಬುಕಾರ್‍ಸ್ಟ್‍ನ ಸ್ಟಾನ್ ಕುಲೇನು (1912) ನ್ಯೂಯಾರ್ಕ್‍ನ ಅರ್ನಾಲ್ಡ್ ನ್ಯಾಸ್ (1914-47) ಪ್ರಾಗ್‍ನ ಆಂಟನ್ ಎಲ್ಷ್‍ನಿಗೆ (1922-32) ಎಡಿನ್‍ಬರೋದ ಆರ್ಥರ್ ಸಿನ್‍ಕ್ಲೇರ್-ಅವರುಗಳು ಜನಪ್ರಿಯಗೊಳಿಸಿದರು.

ಮಸೂರದ ತಂತುಗಳನ್ನು ನಾಶಗೊಳಿಸಿ (Zoಟಿuಟoಡಿ ಜisಣಡಿuಛಿಣioಟಿ) ಹೊರ ತೆಗೆಯುವ ಪದ್ಧತಿ 1866ರಲ್ಲಿ ಡಿಲೂಕ ಎನ್ನುವಾತನಿಂದ ಆರಂಭಗೊಂಡರೂ-ಆಲ್ಫಾ-ಕ್ರೀಮೋಟ್ರಿಪ್ಸಿನ್ ಉಪಯೋಗಿಸಿ ಅದನ್ನು ಒಳ್ಳೆಯ ರೀತಿಯಿಂದ ಮಾಡಿದ ಕೀರ್ತಿ 1958ರಲ್ಲಿ ಜೆ.ಬರಾಕರ್‍ಗೆ 
ಸಲ್ಲುತ್ತದೆ.

ಹೊಲಿಗೆಗಳು : ಕಾರ್ನಿಯದ ಭಾಗದಲ್ಲಿ ಉಂಟಾದ ಗಾಯವನ್ನು ಹೊಲಿಗೆಯ ಮೂಲಕ ಮುಚ್ಚುವ ಪದ್ಧತಿ 1867ರಲ್ಲಿ ಹೆನ್ರಿ ವಿಲಿಯಮ್ಸ್‍ನಿಂದ ಆರಂಭಗೊಂಡರೂ 30 ವರ್ಷಗಳ ನಂತರ 1894ರಲ್ಲಿ ಕಾಲ್ಸ್‍ನಿಂದ ಜನಪ್ರಿಯಗೊಂಡಿತು. ಅದರ ಹಲವು ಬದಲಾವಣೆಗಳು ಉಪಯೋಗಕ್ಕೆ ಬಂದವು.

ಸ್ಥಳೀಯ ಅರಿವಳಿಕೆ ಉಪಯೋಗಿಸುವುದು ಮತ್ತು ವಿವಿಧ ಔಷಧಗಳನ್ನು ಉಪಯೋಗಿಸಿ ನೋವನ್ನು ಕಡಿಮೆಮಾಡುವುದು-ಇವು ಮುಂದಿನ ಬೆಳವಣಿಗೆಗಳಾದವು. ವಿಯನ್ನಾದ ಕಾರ್ಲ್ ಕೋಲರ್ ಎಂಬಾತ 1884ರಲ್ಲಿ ಕೋಕೇನ್ ಹನಿಗಳನ್ನು ಕಣ್ಣಿಗೆ ಬಿಟ್ಟು ಈ ಪದ್ಧತಿ ಆರಂಭಿಸಿದ. ರಿಟ್ರೋಬಲ್ಪಾರ್ ಇಂಜೆಕ್ಷನ್ ಉಪಯೋಗಿಸುವುದು ಆರಂಭಿಸಿದ್ದು 1928ರಲ್ಲಿ ಎಲ್ಷ್‍ನಿಗೆ. ಫೇಶಿಯಲ್ ನರದ ಶಾಖೆಗಳಿಗೆ ಇಂಜೆಕ್ಷನ್ ಕೊಟ್ಟು ಅರಿವಳಿಕೆ ಉಂಟುಮಾಡುವ ಪದ್ಧತಿ ಆರಂಭಿಸಿದ್ದು ಬ್ರಸೆಲ್ಸ್‍ನ ವಾನ್‍ಲಿಂಟ್ 1914ರಲ್ಲಿ. ರೈಟ್ (1921-26) ಎಂಬ ಮದ್ರಾಸಿನ ತಜ್ಞ ಕಿವಿಗಿಂತ ಸ್ವಲ್ಪ ಮುಂಭಾಗದಲ್ಲಿ ಇಂಜೆಕ್ಷನ್ ಕೊಡುವ ರೀತಿಯಲ್ಲಿ ಬದಲಾಯಿಸಿದರೂ ಅದನ್ನು ತೀರ ಸರಳಗೊಳಿಸಿದವನು ಓಬ್ರೈನ್ ಎಂಬಾತ (1929).

ಕಣ್ಣಿನ ಪೊರೆ ಶಸ್ತ್ರಕ್ರಿಯೆಯ ನಂತರ ದಪ್ಪ ಕನ್ನಡಕ ಕೊಡುವ ಪದ್ಧತಿಯನ್ನು 1623ರಲ್ಲಿ ಬೆನಿಟೋ ಡಾಜಾ ಡಿ ವಾಲ್ಡಿಸ್ ಎಂಬಾತನು ಹೇಳಿದ್ದರೂ ಒಂದು ಶತಮಾನ ಕಳೆಯುವವರೆಗೂ, ಅಂದರೆ 18ನೇ ಶತಮಾನದವರೆಗೂ ಇದು ಜಾರಿಗೆ ಬಂದಿರಲಿಲ್ಲ.

(ಡಿ.ಎಸ್.ಎಸ್.)

(ಪರಿಷ್ಕರಣೆ: ಡಾ|| ಎಚ್. ಎಸ್. ಮೋಹನ್)